ವಿಜಯಪುರ: ನನಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಭಾರಿ ಪ್ರೀತಿ ಇದೆ. ಶಾಸಕ ಯತ್ನಾಳ ಸಿಎಂ ಆಗುವ ಸರಕು ಇದ್ದಂತೆ ಎಂದು ವಿಜಯಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಬಿಟ್ಟು ಬಸವತತ್ವವನ್ನು ಶಾಸಕ ಯತ್ನಾಳ ಪಾಲನೆ ಮಾಡಬೇಕು. ಅಂದಾಗ ಮಾತ್ರ ಶಾಸಕ ಯತ್ನಾಳ ಮುಂದಿನ ಸಿಎಂ ಆಗುವ ಸರಕು ನೀವು ಎಂದರು.
ಹತ್ತು ವರ್ಷದ ಹಿಂದೇನೆ ಶಾಸಕ ಯತ್ನಾಳ ನೀವು ಸಿಎಂ ಆಗಬಹುದು ಎಂದು ಹೇಳಿದ್ದೇನೆ. ಅದಕ್ಕಾಗಿ ಚಿಲ್ಲರೆ ಆಗೋಕೆ ಹೋಗ್ಬೇಡಿ. ಬಸವಣ್ಣನವರ ಜನ್ಮ ಭೂಮಿಯಲ್ಲಿ ಶಾಸಕ ಯತ್ನಾಳ ಜನ್ಮ ಆಗಿದೆ. ಅದಕ್ಕಾಗಿ ಬಸವಣ್ಣನವರ ತತ್ವ ಪಾಲನೆ ಮಾಡಿ ಬಸವತತ್ವ ಎತ್ತು ಹಿಡಿರಿ ಅದರಲ್ಲಿ ಶಕ್ತಿ ಇದೆ ಎಂದರು.