ವಿಜಯಪುರ: ರಾಮ, ಕೃಷ್ಣ ಇತಿಹಾಸ ಪುರುಷರಲ್ಲ. ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ವಿವಾದಾತ್ಮಕವಾಗಿ ಭಾಷಣದಲ್ಲಿ ಹೇಳಿದರು.
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ಆಶಯ ಈಡೇರಿದೆಯೇ !? ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ್ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ. ಅಕ್ಬರ್ ಹೆಂಡತಿ ಹಿಂದೂಯಿದ್ರೂ ಆಕೆ ಧರ್ಮಾಂತರ ಆಗಿರಲಿಲ್ಲ.
ಆಕೆ ಹಿಂದೂ ಇದ್ಲು ಅವ ಮುಸ್ಲಿಂ ಇದ್ದ. ಅಕ್ಬರ್ ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ,ಬಹೀಗೆ ಮಾಡಿದ್ದಾರೆ ಅಂತಿರಲ್ಲ. ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತದೆ. ಅವರು ಹಿಂದೂಗಳನ್ನು ವಿರೋಧ ಮಾಡಿದ್ರು ಅಂದ್ರೆ ಒಬ್ರು ಹಿಂದೂ ಭಾರತದಲ್ಲಿ ಇರ್ತಿಲ್ಲ. ಅವರು ಎಲ್ಲರನ್ನೂ ಕೊಲ್ಲಬಹುದಿತ್ತು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು..!? ಎಂದರು.