ವಿಜಯಪುರ: ರಾಜ್ಯ ಸರ್ಕಾರ ಕಬ್ಬಿಗೆ ಎಫ್ಆರ್ಪಿ ದರ ನಿಗದಿ ಮಾಡದೆ ಕಾಲ ಹರಣ ಮಾಡುತ್ತಿದೆ ಎಂದು ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಶನಿವಾರ ಆರೋಪಿಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಕೇವಲ ಕಮಿಟಿ ರಚನೆ ಮಾಡಿದೆ ಹೊರತು ಕಬ್ಬಿನ ಬೆಲೆಗೆ ಯೋಗ್ಯ ಬೆಲೆ ನಿಗದಿ ಮಾಡಿಲ್ಲ. ರೈತರ ಪರಿಸ್ಥಿತಿ ಹೇಳ ತೀರದಂತೆ ಆಗಿದೆ.
ಬರುವ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ದುಡ್ಡು ಬೇಕಾಗಿದೆ. ಅದಕ್ಕಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ರಾಜಕಾರಣಿಗಳಿಗೆ ದುಡ್ಡು ನೀಡುತ್ತಾರೆ. ಇದರಿಂದ ರೈತರ ಬದುಕು ಬೀದಿಗೆ ಬರುತ್ತಿದೆ. ಅಲ್ಲದೇ, ಸರ್ಕಾರ ಮಾತ್ರ ರೈತರ ಪರ ಇಲ್ಲ ಎಂದರು.
*ರೈತರಲ್ಲಿ ಮನವಿ*
ರೈತರು ಮೂರು ವರ್ಷಗಳ ಕಾಲ ಕಬ್ಬು ಬೆಳೆಯುವುದನ್ನು ಕೈ ಬಿಡಬೇಕು. ಅದಕ್ಕಾಗಿ ರೈತರು ಒಟ್ಟಾಗಿ ಕಬ್ಬು ಉತ್ಪನ್ನ ಮಾಡುವುದು ಬಿಡಬೇಕು. ಅಂದಾಗ ಮಾತ್ರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬುದ್ಧಿ ಬರುತ್ತದೆ. ರೈತರು ಬೆಳೆಯುವ ಬೆಳೆಗಳಿಗೆ ಯೋಗ್ಯ ದರ ನಿಗದಿ ಮಾಡಿಲ್ಲ. ಸರ್ಕಾರ ಕಾರ್ಖಾನೆಗಳ ಕೈಗೊಂಬೆಯಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.
*ಸರ್ಕಾರಕ್ಕೆ ತಕ್ಕ ಪಾಠ ಫಿಕ್ಸ್*
ರೈತರ ಬೆಳೆಗಳು ಹಾಗೂ ಕಬ್ಬಿಗೆ ದರ ನಿಗದಿ ಮಾಡಬೇಕು. ಇಲ್ಲದೇ ಹೋದ್ರೇ ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ. ರೈತರ ವಿರುದ್ಧ ಸರ್ಕಾರ ಕೆಲಸ ಮಾಡಬಾರದು. ಅದಕ್ಕಾಗಿ ತಕ್ಷಣವೇ ದರ ನಿಗದಿ ಮಾಡಿ, ಇಲ್ಲವೇ ನಮ್ಮ ಹೋರಾಟ ಮಾತ್ರ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.