ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ಲ-ಮದರಿ ಗ್ರಾಮದ ಬಳಿಯಿರುವ ಶ್ರೀಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಸಾಗಿಸುವ ಕ್ಯಾನಲ್ ಯಂತ್ರದಲ್ಲಿ ಸಿಕ್ಕಿ ವೃದ್ಧ ಅಸುನೀಗಿರುವ ಘಟನೆ ನಡೆದಿದೆ.
ಹಡಗಲಿ ಗ್ರಾಮದ ಸಿದ್ದಪ್ಪ ಅಮರಪ್ಪ ದೊಡಮನಿ (55) ಮೃತಪಟ್ಟಿರುವ ದುರ್ದೈವಿ. ಕಾರ್ಖಾನೆಯಲ್ಲಿ ಕಬ್ಬು ಅನ್ಲೋಡ್ ಮಾಡಿ ಕ್ಯಾನಲಗೆ ಸುರಿದಾಗ ಅಕ್ಕಪಕ್ಕದಲ್ಲಿ ಬಿದ್ದಿರುವ ಕಬ್ಬಿನ ಜಲ್ಲೆ ಆಯ್ದು ಕ್ರೇನ್ಗೆ ಹಾಕುವ ಕೆಲಸ ಮಾಡುವ ವೇಳೆ ಜಾರಿ ಕ್ಯಾನಲನೊಳಗೆ ಬಿದ್ದು ಮೃತಪಟ್ಟಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.