ವಿಜಯಪುರ: ಹಣ ನೀಡದಕ್ಕೆ ವೃದ್ಧೆಯೊಂದಿಗೆ ಅನುಚಿತವಾಗಿ ವರ್ತಿಸಿ ವ್ಯಕ್ತಿ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿಯಲ್ಲಿ ನಡೆದಿದೆ. 65 ವರ್ಷದ ಶಾಂತಾಬಾಯಿ ರಾಠೋಡ ಹಲ್ಲೆಗೊಳಗಾದ ವೃದ್ಧೆ. ಜಾಲಗೇರಿ ನಿವಾಸಿ ಮಾದಣ್ಣ ಲಾಲಿಯಿಂದ ಹಲ್ಲೆದಿದ್ದಾನೆ ಎಂದು ವೃದ್ಧೆಯ ಕುಟುಂಬಸ್ಥರ ಆರೋಪವಾಗಿದೆ.
ಇನ್ನು ಮಾದಣ್ಣನಿಂದ ಶಾಂತಾಬಾಯಿ 30 ಸಾವಿರ ಕೈಗಡ ಪಡೆದಿದ್ದಳು. ಹಣ ನೀಡಲು ವಿಳಂಬ ಹಿನ್ನಲೆ ವೃದ್ಧೆಯ ಸೀರೆ ಹಿಡಿದು ಮಾದಣ್ಣ ಎಳೆದಾಡಿ, ಹಲ್ಲೆಗೈದಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ನನಗೆ ನ್ಯಾಯ ಒದಗಿಸಿ ಎಂದು ಶಾಂತಾಬಾಯಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.