ಹುಬ್ಬಳ್ಳಿ: ರಸ್ತೆ ತಿರುವಿನ ವೇಳೆ ಜೆಸಿಬಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಕಾರವಾರ ರಸ್ತೆ ಹೇಸಿಗೆ ಮಡ್ಡಿ ಬಳಿ ನಡೆದಿದೆ.
ಹಳೇಹುಬ್ಬಳ್ಳಿ ಛಬ್ಬಿ ಪ್ಲಾಟ್ ನಿವಾಸಿ ಆದಿಲ್ ಶಕೀಲ ಸಿಕಂದರ್ (೧೮) ಮೃತಪಟ್ಟಿದ್ದು, ಹಳೇಹುಬ್ಬಳ್ಳಿಯ ಜಾವೇದ ಶೇಖ, ಖಾದರ ಶೇಖ ಗಾಯಗೊಂಡಿದ್ದಾರೆ. ವೇಗವಾಗಿ ಹೊರಟಿದ್ದ ಬೈಕ್ ಸವಾರನು ತಿರುವಿನಲ್ಲಿ ಬರುತ್ತಿದ್ದ ಜೆಸಿಬಿ ವಾಹನ ಕಾಣಿಸದೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಸಂಪೂರ್ಣ ಸುಟ್ಟ ಕರಕಲಾಗಿದೆ. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.