ವಿಜಯಪುರ: ಕುರಿಗಾಯಿಗೆ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಕುರಿಗಾಯಿ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ.
ಮೃತನನ್ನು ಚಿಕ್ಕೋಡಿ ಮೂಲದ ನಿಂಗಪ್ಪ ಹಾಲಪ್ಪ ಕದ್ದಿ (50) ಎಂದು ಗುರ್ತಿಸಲಾಗಿದೆ. ಬೈಕ್ ಸವಾರ ಕವಡಿಮಟ್ಟಿ ಗ್ರಾಮದ ಹಣಮಂತ ನಿಂಗಪ್ಪ ಮಾದರಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿಂಗಪ್ಪನು ಸಹಪಾಠಿಗಳ ಜೊತೆ ಕುರಿ ಹಿಂಡನ್ನು ಮೇಯಿಸುತ್ತ ಊರಿಂದ ಊರಿಗೆ ಸಂಚರಿಸುವಂಥವನಾಗಿದ್ದಾನೆ.
ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ಐ ಆರೀಫ್ ಮುಶಾಪುರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.