ವಿಜಯಪುರ: ವಿಜಯಪುರದ ನಾಗಠಾಣ ಕ್ಷೇತ್ರದ ಬಿಜೆಪಿ ಅಚ್ಚರಿಯ ಅಭ್ಯರ್ಥಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳಿ ಆಟೋದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿ, ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಗುರುವಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನದಂದು ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಐಹೊಳ್ಳಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಲು ಆಟೋದಲ್ಲಿ ಪಯಣ ಮಾಡಿದ್ದಾರೆ.
ತೀರ ಸಾಮಾನ್ಯ ಕಾರ್ಯಕರ್ತನಾದ ಸಂಜೀವನ ಹೆಸರಿನಲ್ಲಿ ಸ್ವಂತ ಕಾರು, ಬೈಕ್ ಸಹ ಇಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬರಲು ಆಟೋಕ್ಕಾಗಿ ಕಾಯ್ದು ನಿಂತರು. ಬಹಳ ಹೊತ್ತಿನ ಬಳಿಕ ಬಂದ ಆಟೋ ಹತ್ತಿ ಜಿಲ್ಲಾ ಪಂಚಾಯಿತಿ ಆವರಣದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಗಮಿಸಿದ್ದು ಕಾರ್ಯಕರ್ತರನ್ನು ಸಹ ಅಚ್ಚರಿಗೀಡು ಮಾಡಿತು. ಸಾದಾ ಡ್ರೆಸ್, ಕಾಲಲ್ಲಿ ಹವಾಯಿ ಚಪ್ಪಲಿ ಧರಿಸಿ ಎದುರುಗಡೆಯೇ ನಿಂತಿದ್ದ ಅಭ್ಯರ್ಥಿಯನ್ನು ಗುರುತಿಸಲು ಕಾರ್ಯಕರ್ತರು ಹೈರಾಣ ಆದ್ದರು.