ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಯೋಧ ಅನಾರೋಗ್ಯದ ಹಿನ್ನೆಲೆಯಲ್ಲಿ ಲಖನೌದ ಕಮಾಂಡೋ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಪ್ರಕಾಶ ಶಿರಶ್ಯಾಡ ಮೃತ ಯೋಧ ಎಂದು ತಿಳಿದು ಬಂದಿದೆ. ಯೋಧ ಪ್ರಕಾಶ 2011ರಲ್ಲಿ ಸೈನ್ಯದಲ್ಲಿ ಭರ್ತಿಯಾಗಿ ಮದ್ರಾಸ್ ರೆಜಿಮೆಂಟ್ 7 ವೆಲಿಂಗ್ಟನ್ದಲ್ಲಿ ತರಬೇತಿ ಪಡೆದು ನಂತರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಇನ್ನಿತರ ಕಡೆ ಸೇವೆ ಸಲ್ಲಿಸಿ ಸದ್ಯ ಮಧ್ಯಪ್ರದೇಶದ ಗ್ವಾಲಿಯರ್ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಇಂಡೋ- ಲೆಬನಾನ್ ಜಂಟಿ ಸಮರಾಭ್ಯಾಸ ತರಬೇತಿಯಲ್ಲಿ ಲೆಬನಾನದಲ್ಲಿ ಭಾಗಿಯಾಗಿದ್ದರು. ಅವರಿಗೆ ತಂದೆ ನೀಲಪ್ಪ, ತಾಯಿ ರುಕಮಾಬಾಯಿ, ಪತ್ನಿ ಕವಿತಾ, ಮಕ್ಕಳಾದ ಪ್ರತೀಕ್ಷಾ, ಪ್ರಗತಿ, ಸಹೋದರ ಸಂತೋಷ ಇದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಸಕಲ ಗೌರವದೊಂದಿಗೆ ಸ್ವಗ್ರಾಮ ಖೇಡಗಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.