ವಿಜಯಪುರ: ಬೈಕ್ಗೆ ಬಸ್ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸ್ಕಿಡ್ಯಾಗಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ಬಳಿ ನಡೆದಿದೆ.
ಬಸ್ ಡಿಕ್ಕಿಯಾಗಿರುವ ಪರಿಣಾಮ ಬಸ್ ಡ್ರೈವರ್ ಚಾಂದಪಟೇಲ್ ಬಿರಾದಾರನ ಮೇಲೆ ಬೈಕ್ ಸವಾರರು ಹಲ್ಲೆಗೈದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಡ್ರೈವರ್ ಬಿರಾದಾರ ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಹಲ್ಲೆಗೈದು ಇಬ್ಬರು ಪರಾರಿಯಾಗಿದ್ದಾರೆ. ಹೊರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.