ಧಾರವಾಡ: ವೃದ್ಧೆಯೊಬ್ಬರ ಕಾಲಿನ ಮೇಲೆ ಬಸ್ ಹಾಯ್ದು ಹೋದ ಪರಿಣಾಮ ಆಕೆಯ ಕಾಲು ತುಂಡರಿಸಿದ ಘಟನೆ ಧಾರವಾಡದ ಕೋರ್ಟ್ ಸರ್ಕಲ್ ಬಳಿ ಸಂಭವಿಸಿದೆ. ಮೀರಾ ನವಲಗುಂದ (70) ಎಂಬ ವೃದ್ಧೆಯೇ ಗಾಯಗೊಂಡವಳು. ಕೋರ್ಟ್ ಸರ್ಕಲ್ ಬಳಿ ಇಳಿಯುವ ಅವಸರದಲ್ಲಿ ಕೆಳಗೆ ಬಿದ್ದ ಈಕೆಯ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಆಕೆಯ ಕಾಲಿನ ಮೇಲೆ ಹರಿದಿದೆ. ಆಕೆಯ ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಕೂಡಲೇ ಸಂಚಾರ ಠಾಣೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.