ವಿಜಯಪುರ: ಒಂದು ಕೋಳಿ ದಿನಕ್ಕೊಂದೆರಡು ಮೊಟ್ಟೆ ನೀಡುವುದು ಸರ್ವೇ ಸಾಮಾನ್ಯ. ಆದ್ರೇ, ಇಲ್ಲೊಂದು ಕೋಳಿ ಅರ್ಧ ದಿನಕ್ಕೆ ಬರೋಬ್ಬರಿ 31 ಮೊಟ್ಟೆಗಳನ್ನು ನೀಡಿದೆ. ಉತ್ತರಾಖಂಡ ರಾಜ್ಯದ ಕೋಳಿ ಒಂದು 12 ಗಂಟೆಗಳಲ್ಲಿ 31 ಮೊಟ್ಟೆಗಳನ್ನು ನೀಡಿದೆ. ಇದು ಅಲ್ಮೋರಾ ಜಿಲ್ಲೆಯ ಬಸೋತ್ ಗ್ರಾಮದ ಗಿರೀಶ್ ಚಂದ್ರ ಬುಧಾನಿ ಎಂಬುವರ ಕೋಳಿ ಸಾಧನೆ ಮಾಡಿದೆ. ಇದೇ ತಿಂಗಳ 25ರಂದು ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯೊಳಗೆ 31 ಮೊಟ್ಟೆ ಇಟ್ಟಿವೆ ಎಂದು ಗಿರೀಶ್ ತಿಳಿಸಿದರು. ಗಿರೀಶ್ ಅವರ ಮನೆಗೆ ಬಂದ ಪಶುಸಂಗೋಪನೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.