ಬೀದರ್: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಅಥರ್ವ ಕಾಲೇಜ್ನಲ್ಲಿರುವ ಸಿದ್ಧೇಶ್ವರ ಶ್ರೀಗಳ ಫೋಟೊ ಎದುರು ಪಾರಿವಾಳ ಕುಳಿತುಕೊಂಡಿದೆ. ಕಾಲೇಜಿನ ಉಳಿದ ಫೋಟೋ ಬಿಟ್ಟು ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಮುಂದೆ ಮಾತ್ರ ಪಾರಿವಾಳ ಕುಳಿತುಕೊಂಡಿದೆ. ಇದನ್ನು ಕಂಡ ಕಾಲೇಜ್ ಸಿಬ್ಬಂದಿ ಪಾರಿವಾಳ ಓಡಿಸಲು ಪ್ರಯತ್ನಿಸಿದ್ದಾರೆ. ಆದ್ರೂ, ಸಿದ್ಧೇಶ್ವರ ಶ್ರೀಗಳ ಫೋಟೋ ಬಿಟ್ಟು ಪಾರಿವಾಳ ಹೋಗುತ್ತಿಲ್ಲ.