ವಿಜಯಪುರ: ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ಆಗಿರುವ ಘಟನೆ ವಿಜಯಪುರ ನಗರದ ಹೊಸ ಬಬಲೇಶ್ವರ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಡೆದಿದೆ. ಬಸ್ ಸೀಟ್ಗಾಗಿ ಇಬ್ಬರು ಮಹಿಳೆಯರ ಮಧ್ಯೆ ಜಗಳ ಆಗಿದೆ. ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದುಕೊಂಡು ವೈರಲ್ ಮಾಡಿದ್ದಾರೆ. ತದನಂತರ ಇಬ್ಬರು ಮಹಿಳೆಯರಿಗೆ ಪ್ರಯಾಣಿಕರು ಸಮಾಧಾನ ಪಡಿಸಿದ್ದಾರೆ.