ವಿಜಯಪುರ: ಬುದ್ದಿಜೀವಿ, ಪ್ರಗತಿಪರರ ವಿರುದ್ಧ ಮತ್ತೆ ಶಾಸಕ ಯತ್ನಾಳ ವಾಗ್ದಾಳಿ ಮಾಡಿದರು. ಬುದ್ದಿಜೀವಿ, ಪ್ರಗತಿಪರರು ಸೇರಿ ಸ್ವಾಮೀಜಿಗಳನ್ನು ದಾರಿ ತಪ್ಪಿಸ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದ ಕಂದಗಲ್ ಹಣಮಂತರಾಯ್ ರಂಗಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಒಳ್ಳೆ ಶಿಕ್ಷಣ ಕೊಡಬೇಕು ಅಂತ ಒಳ್ಳೆ ಉದ್ದೇಶದಿಂದ ಶಿಕ್ಷಣ ನೀತಿ ಬದಲಾವಣೆ ಮಾಡಿದ್ದಾರೆ.
ಲಾರ್ಡ್ ಮೆಕಾಲೆ ಶಿಕ್ಷಣ ನೀತಿ ಗುಲಾಮಗಿರಿಯಿಂದ ಹೊರ ತರುವ ಪ್ರಯತ್ನ ಪ್ರಧಾನಿ ಮೋದಿ ಮಾಡುತ್ತಿದ್ದಾರೆ.
ಹೊಸ ಯುಗ ದೇಶದಲ್ಲಿ ಪ್ರಾರಂಭ ಮಾಡಿದ್ದಾರೆ.
ಹೊಸ ಶಿಕ್ಷಣ ನೀತಿ ಕೆಲವೊಂದು ಮಂದಿ ವಿರೋಧ ಮಾಡ್ತಾರೆ ಎಂದು ಕಿಡಿಕಾರಿದರು.