ವಿಜಯಪುರ: ಶಾಸಕ ಸತೀಶ ಜಾರಕಿಹೊಳಿ ಬಾಯಿ ಮುಚ್ಕೊಂಡು ಸುಮ್ಮನೆ ಇರಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಹಿಂದೂ ಹುಲಿ ಖ್ಯಾತಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
ಹಿಂದೂ ಅಶ್ಲೀಲ ಪದ ಎಂಬ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್ ವರೆಗೂ ಪ್ರತಿಭಟನೆ ನಡೆಸಿ, ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಯತ್ನಾಳ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಬಗ್ಗೆ ಅತ್ಯಂತ ಅಶ್ಲೀಲವಾಗಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ. ಸಾವಿರಾರು ವರ್ಷದ ಸನಾತ ಧರ್ಮ ಹಿಂದೂ ಧರ್ಮ ಆಗಿದೆ. ಇನ್ನೂ ಸತೀಶ ಜಾರಕಿಹೊಳಿಗೆ ನಾಚಿಕೆ ಆಗ್ಬೇಕು. ಯಾರೋ ಬರೆದಿದ್ದು ಹೇಳಿದ್ದು ಖಂಡನೀಯ ಎಂದರು.
ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಜಾರಕಿಹೊಳಿ ತಕ್ಷಣವೇ ಕಾಂಗ್ರೆಸ್ನಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಜಾರಕಿಹೊಳಿ ದೊಡ್ಡ ಸಿದ್ಧಾಂತ ಸಿಕಾಮನಿನಾ..? ಸುಮ್ಮನೆ ಬಾಯಿ ಮುಚ್ಕೊಂಡು ಕುಳಿತುಕೊಂಡ್ರೆ ಚಲೋ ಎಂದು ಎಚ್ಚರಿಕೆ ನೀಡಿದರು. ಬರುವ 13ಕ್ಕೆ ಗೋಕಾಕಕ್ಕೆ ಹೋಗ್ತಾ ಇದೇನಿ. ಬರೋಬ್ಬರಿ ಉತ್ತರ ನೀಡ್ತೇನೆ. ಪಂಚಮಸಾಲಿ, ಹಿಂದೂ ಬಗ್ಗೆ ಸತೀಶ ಜಾರಕಿಹೊಳಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ ನಿಜವಾದ ಹಿಂದೂ ಧರ್ಮದವರು ಏನು ಅನ್ನೊದು ತೋರಿಸುತ್ತಾರೆ ಎಂದರು.