ಧಾರವಾಡ: ತಳಭಾಗದಲ್ಲಿ ಕೊಳೆತಿದ್ದ ಮರವೊಂದು ಗಾಳಿಗೆ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ಧಾರವಾಡದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ನಡೆದಿದೆ. ಈ ವೇಳೆಯಲ್ಲಿ ಮರದ ಕೆಳಗೆ ಪಾರ್ಕ್ ಮಾಡಲಾಗಿದ್ದ ಹಲವು ಬೈಕ್ಗಳು ಜಖಂಗೊಂಡಿವೆ. ಅಲ್ಲದೇ, ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.