ವಿಜಯಪುರ: ಭೀಮಾತೀರದ(Bheematheer) ನದಿಯಲ್ಲಿ ವ್ಯಕ್ತಿಯ ಶವ(Body) ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಬಳಿಯ ನದಿಯಲ್ಲಿ ಶವ ಸಿಕ್ಕಿದೆ. ಕಪನಿಂಬರಗಿ ಗ್ರಾಮದ ಶಾಂತಯ್ಯ ಹಿರೇಮಠ ಮೃತಪಟ್ಟಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನೂ ಇದು ಕೊಲೆಯೋ(Murder) ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಝಳಕಿ(Zalaki) ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/09/IMG_20230906_183320-747x1024.jpg)