ವಿಜಯಪುರ: ರಾಜ್ಯದಲ್ಲಿ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಸಹಾಯಧನ ಕಲ್ಪಿಸಲು ಆಗ್ರಹಿಸಬೇಕು. ಸಂಪರ್ಕವಾಗಿ ವಿದ್ಯುತ್ ಪೂರೈಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಹೆಸ್ಕಾಂ ವ್ಯಾಪ್ತಿಗೆ ಅಂದಾಜು 6400 ಮಿಲಿಯನ್ ಯುನಿಟ್ಸ್ ಬೇಕು. ಹಂಚಿಕೆಯಾಗಿದ್ದು 5500 ಮಿಲಿಯನ್ ಯುನಿಟ್ಸ್ ಮಾತ್ರ. ಅಂದರೆ ಸುಮಾರು 900 ಮಿಲಿಯನ್ ಯುನಿಟ್ಸ್ ವಿದ್ಯುತ್ ಕೊರತೆ ಇದೆ ಎಂದರು.
ಗುತ್ತಿಗೆದಾರರ ಸಂಘದ ಪರವಾಗಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಆಧ್ಯಕ್ಷ ಎಂ ಬಿ ಪಾಟೀಲ್ ಬ್ಯಾಟಿಂಗ್ ಮಾಡಿದರು. ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದ್ದಾರೆ. ಅದಕ್ಕಾಗಿ ಹಾಲಿ ಹೈಕೋರ್ಟ್ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದರು. ಇನ್ನು ನಾವು ಎಲ್ಲಾ ದಾಖಳಾತಿಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ದಾಖಲಾತಿಗಳನ್ನು ಒದಗಿಸದಿದ್ದರೆ ನಮಗೆ ಏನು ಬೇಕಾದರೂ ಶಿಕ್ಷೆ ನೀಡಿ ಎಂದಿದ್ದಾರೆ. ಇಷ್ಟೆ ಮೇಲೆ ನಿಮಗೆ ಏನು ತೊಂದರೆ ಎಂದು ಸರ್ಕಾರಕ್ಕೆ ಎಂ ಬಿ ಪಾಟೀಲ್ ಪ್ರಶ್ನೆ ಮಾಡಿದರು.