ಆಂದ್ರಪ್ರದೇಶ: ಕೋವಿಡ್ 19 ಬರುತ್ತದೆ ಎಂದು ತಾಯಿ, ಮಗಳು ತಮ್ಮನ್ನು ತಾವೇ ಎರಡು ವರ್ಷಗಳ ಕಾಲ ದಿಗ್ಬಂಧನ ವಿಧಿಸಿಕೊಂಡಿರುವ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ತಾಯಿ ಮತ್ತು ಮಗಳು ಕೋವಿಡ್ ಭಯದಿಂದ ಮನೆಯೊಳಗೆ ಎರಡು ವರ್ಷಗಳ ವರೆಗೂ ಬಂಧಿಯಾಗಿದ್ದರು. ಮನೆಯಿಂದ ಹೊರಗಡೆ ಬಂದ್ರೇ ಕೋವಿಡ್ ಬರುತ್ತದೆ. ಇದರಿಂದ ಪ್ರಾಣ ಹೋಗುತ್ತದೆ ಎಂದು ತಾಯಿ-ಮಗಳು ಬಾಗಿಲು ಹಾಕಿ ಮನೆಯೊಳಗೆ ಎರಡು ವರ್ಷಗಳಿಂದ ಉಳಿದುಕೊಂಡಿದ್ದರು. ಇನ್ನು ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೋಗಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.