ವಿಜಯಪುರ; ಐತಿಹಾಸಿಕ ನಗರದ ಹೊರ ವಲಯವಾದ ಅರಕೇರಿ ಎಲ್.ಟಿ. ಬಳಿ ವೃದ್ಧರಿಗೆ ನೆಮ್ಮದಿಯ ವಾತಾವರಣ ಕಲ್ಪಿಸಲೆಂದೇ ನಿರ್ಮಾಣವಾಗಿರುವ ‘ಸ್ವಾಭಿಮಾನ ಹೌಸ್’ (ಓಲ್ಡ್ಏಜ್ ಹೋಮ್) ಇದೇ ದಿನಾಂಕ ೧೮ ರ ಭಾನುವಾರ ಬೆಳಗಗೆ ೧೧ ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಆಪ್ಟೆ ಫೌಂಡೇಶನ್ ಅಧ್ಯಕ್ಷ ವಿನಯ್ ಆಪ್ಟೆ ಹಾಗೂ ರಾಮಸಿಂಗ್ ರಜಪೂತ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಘಾಟನೆಯನ್ನು ನೆರವೇರಿಸಲು ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಕೊಲ್ಹಾಪುರ ಶ್ರೀಮತಿ ಪ್ರತಿಭಾ ಅಪ್ಟೆ ಅವರು ಆಗಮಿಸುತ್ತಿದ್ದಾರೆ. ಮುಖ್ಯ ಅತಿಥಿಗಳಾಗಿ, ವಿಜಯಪುರ ಮಹಾನಗರ ಪಾಳಿಕೆ ಸದಸ್ಯ ಶ್ರೀ ಶಿವರುದ್ರ ಬಾಗಲಕೋಟ (ವಾರ್ಡ್ ನಂ. ೩೨) ಮತ್ತು ಬಾಗಲಕೋಟ ಲೋಕಾಯುಕ್ತ ಸಿ.ಪಿ.ಐ. ಶ್ರೀ ಮಹಿಂದ್ರಕುಮಾರ ನಾಯಿಕ ಅವರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
*ವಿವರ*
೪ ಎಕರೆ ಪ್ರದೇಶದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡ ನಿಸರ್ಗ ಸ್ನೇಹ ‘ಓಲ್ಡ್ ಏಜ್ ಹೋಮ್’ ಇದಾಗಿದೆ. ಒಟ್ಟು ೩೦ ಜನ ವೃದ್ಧರು ಇಲ್ಲಿ ಏಕಕಾಲಕ್ಕೆ ವಾಸಿಸುವರಿಕೆ ಎಲ್ಲ ವ್ಯವಸ್ಥೆ ಇಲ್ಲಿದೆ. ಇಲ್ಲಿ ಒಟ್ಟು ೧೨ ಕೋಣೆಗಳ ಎಲ್ಲ ಅಗತ್ಯ ಸೌಲಭ್ಯಗಳ ಕಟ್ಟಡ ಇಲ್ಲಿ ನಿರ್ಮಾಣ ಮಾಡಿದ್ದು ಅದರಲ್ಲಿ ೨ ಬೆಡ್ಗಳ ೯ ಕೋಣೆಗಳು, ೪ ಬೆಡ್ಗಳ ೩ ಕೋಣೆಗಳನ್ನು ನಿರ್ಮಿಸಲಾಗಿದೆ ಎಂದರು.
ಇಲ್ಲಿ ತಂಗಿರುವ ವೃದ್ಧರ ಆರೋಗ್ಯದ ಮೇಲೆ ೨೪x೭ ನಿಗಾ ಇಡಲು ಓರ್ವ ಹಿರಿಯ ದಾದಿ (ನಸ್) ಹಾಗೂ ಅವರ ಅಗತ್ಯ ಸೇವೆಗಳನ್ನು ಪೂರೈಸಲು ಸೇವಾ ಮನೋಭಾವವುಳ್ಳ ಪರಿಚಾರಕರ ಹಾಗೂ ಅಡುಗೆ ತಯಾರಕರು, ಸಹಾಯಕ/ಕಿಯರ ವಾಸ್ತವ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲಿದೆ. ಮನೆಯವಂತೆ ನಿತ್ಯ ೨೪x೭ ಅವರ ಯೋಗಕ್ಷೇಮ ಮತ್ತು ಅಗತ್ಯತೆ ವಿಚಾರಿಸಲು ಜೊತೆಗೆ ಸಮರ್ಪಣಾ ಮನೋಭಾವದಿಂದ ಹಿರಿಯರ ಸೌಖ್ಯ ಕಾಪಾಡಲು ಆಪ್ಟೆ ಫೌಂಡೇಶನ್ ಮುಖ್ಯಸ್ಥ ವಿನಯ್ ಆಪ್ಟೆ ದಂಪತಿ ಸಹ ಈ ಪ್ರದೇಶದಲ್ಲಿಯೇ ವಾಸ್ತವ್ಯ ಹೂಡಿರುತ್ತಾರೆ.
ಬದುಕಿನ ಕೊನೆಯ ಕ್ಷಣದ ವರೆಗೂ ಸುಖವಾಗಿರಬೇಕೆಂಬುದು ಮನುಷ್ಯನ ಸಹಜ ಬಯಕೆ. ಬದುಕಿನ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ಮನಸ್ಸಿಗೆ ಸಮಾಧಾನ, ಸಂತೃಪ್ತಿ ತರುವಂಥ ವಾತಾವರಣ ಈ ‘ಸ್ವಾಭಿಮಾನ ಹೌಸ್’ನಲ್ಲಿ ನಿರ್ಮಾಣಗೊಂಡಿದೆ. ಸೇವಾ ಮನೋಭಾವನೆ, ಮಾನವೀಯತೆ ಹಾಗೂ ಹೃದಯವಂತಿಕೆಯಿAದ ‘ಸ್ವಾಭಿಮಾನ ಹೌಸ್’ ನಲ್ಲಿ ತಂಗಿರುವ ವೃದ್ಧರ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ಅವರೆಲ್ಲ ಬದುಕಿನ ಘನತೆಯನ್ನು ಕಾಯ್ದುಕೊಂಡು ನೆಮ್ಮದಿಯಿಂದ, ಸೌಖ್ಯದಿಂದ ಬಾಳಲು ಅಗತ್ಯವಿರುವ ಎಲ್ಲ ವಾತಾವರಣ ಇಲ್ಲಿದೆ. ಮೊದಲಿನಂತೆ ಕೌಟುಂಬಿಕ ವಾತಾವರಣ ಈಗಿಲ್ಲ. ವೃದ್ಧರು ತಮಗೆ ಇಷ್ಟವಿರದಿದ್ದರೂ ಅನಿವಾರ್ಯವಾಗಿ ವೃದ್ಧಾಶ್ರಮಗಳ ಮೊರೆ ಹೋಗುವುದು ಈಗ ಸಾಮಾನ್ಯವಾಗುತ್ತಿದೆ. ಅನೇಕ ಸ್ವಾಭಿಮಾನ ತಂದೆ-ತಾಯಿ ತಮ್ಮಿಂದ ತಮ್ಮ ಮಕ್ಕಳಿಗೆ ತೊಂದರೆಯಾಗಬಾರದೆAದು ತಮ್ಮನ್ನು ವೃದ್ಧಾಶ್ರಮಗಳಿಗೆ ಸೇರಿಸಿ ಎಂದು ಕೇಳಿಕೊಳ್ಳುತ್ತಾರೆ. ಏಕೆಂದರೆ ಅವರು ಮನೆಯಲ್ಲಿ ಇದ್ದರೂ ಸಹ ಒಂದು ರೀತಿ ಸ್ವಾತಂತ್ರö್ಯವಿಲ್ಲದ ಬದುಕು ಅವರದಾಗಿರುತ್ತದೆ. ಇನ್ನು ಹಲವು ಕುಟುಂಬಗಳಲ್ಲಿ ಇರುವ ಮಕ್ಕಳು ಹೊರದೇಶಗಳಲ್ಲೋ, ದೂರದ ಸ್ಥಳಗಳಿಗೆ ಉದ್ಯೋಗದ ಕಾರಣದಿಂದ ವಲಸೆ ಹೋಗಿರುವುದರಿಂದ ಅಲ್ಲಿಗೆ ಹೋಗಲು ಇಷ್ಟವಿರದ ಅಂಥಹ ತಂದೆ-ತಾಯಿಗೆ ಈ ‘ಸ್ವಾಭಿಮಾನ ಹೌಸ್’ ವರದಾನವಾಗಿದೆ. ಅವರಿಗೆ ಶಾಂತಿ, ಸಮಾಧಾನ ತರುವ, ಯಾವುದೇ ರೀತಿಯ ಮಾನಸಿಕ ತೊಂದರೆಗಳು, ಬೇಸರದ ಘಟನೆ ನಡೆಯದಂತೆ ಅವರು ನಿರಾತಂಕವಾಗಿ ಇರುವಂತೆ ಈ ಮನೆಯಲ್ಲಿ ಮುತುವರ್ಜಿಯಿಂದ ಕಾಣಲಾಗುತ್ತದೆ ಎಂದು ಹೇಳಿದರು.
ಸಂಪೂರ್ಣವಾಗಿ ಸಾವಯವ ಪದಾರ್ಥಗಳಿಂದ ತಯಾರಿಸಲಾದ ಬಿಸಿಯಾದ, ಹಿತವಾದ ಅಡುಗೆ ಸಮಯಕ್ಕೆ ಸರಿಯಾಗಿ ಒದಗಿಸುತ್ತ ಇಲ್ಲಿರುವ ಹಿರಿಯರ ಆರೋಗ್ಯವನ್ನು ವೃದ್ಧಿಸುವ ಉಪಚಾರ ಇಲ್ಲಿದೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ನಿತ್ಯ ಧಾನ, ಯೋಗ ಸೇರಿದಂತೆ ಅನೇಕ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಜೊತೆಗೆ ಆಗಾಗ ಸಂಪನ್ಮೂಲ ವ್ಯಕ್ತಿಗಳನ್ನು ಈ ‘ಸ್ವಾಭಿಮಾನ ಹೌಸ್’ ಗೆ ಬರಮಾಡಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ನೆರವಾಗಬಲ್ಲ ಸಂವಾದಗಳು, ಕಾರ್ಯಕ್ರಮಗಳನ್ನು ಆಗಾಗ ಇಲ್ಲಿ ಏರ್ಪಡಿಸಲಾಗುತ್ತದೆ. ಮನೋರಂಜನೆ ಒದಗಿಸಲು ಹಾಗೂ ಸಮಯ ಕಳೆಯಲು ಒಳಾಂಗಣ ಕ್ರೀಡೆಗಳ ಸೌಲಭ್ಯ ಇಲ್ಲಿದೆ. ಅದಕ್ಕಾಗಿ ಪ್ರತ್ಯೇಕವಾದ, ವಿಶಾಲವಾದ ಕೋಣೆಯನ್ನೇ ಇಲ್ಲಿ ನಿರ್ಮಿಸಲಾಗಿದೆ ಎಂದರು.
‘ಸ್ವಾಭಿಮಾನ ಹೌಸ್’ ಗೆ ಬರುವ ವೃದ್ಧರು ಮನೆಯಲ್ಲಿ ಕಾಣದ, ಸಿಗದ ನೆಮ್ಮದಿಯನ್ನು ಅರಸಿ ಬಂದಿರುತ್ತಾರೆ. ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ನಿಗದಿತ ಶುಲ್ಕದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಅಗತ್ಯ ಸೇವೆ ಒದಗಿಸಲು ವೃದ್ಧರ ಹಿತ ಕಾಪಾಡಲು ಆಪ್ಟೆ ಫೌಂಡೇಶನ್ ಅಡಿಯಲ್ಲಿ ಈ ‘ಸ್ವಾಭಿಮಾನ ಹೌಸ್’ (ಓಲ್ಡ್ ಏಜ್ ಹೊಂ) ಜನ್ಮ ತಾಳಿದೆ ಎಂದು ತಿಳಿಸಲು ಹೆಮ್ಮೆಪಡುತ್ತೇವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಹನ್ ಆಪ್ಟೆ, ಚೇತನ್ ರಜಪೂತ ಹಾಗೂ ರಾಹುಲ್ ಆಪ್ಟೆ ಇದ್ದರು.