ಇದೇ ೨೭ ರಿಂದ ರಾಜ್ಯಾಧ್ಯಂತ್ಯ ಸರ್ಕಾರದ ವಿರುದ್ಧ ಜನಾಂದೋಲನ:

Karnataka 1 News
ಇದೇ ೨೭ ರಿಂದ ರಾಜ್ಯಾಧ್ಯಂತ್ಯ ಸರ್ಕಾರದ ವಿರುದ್ಧ ಜನಾಂದೋಲನ:

*ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ*

*ಇದೇ ೨೭ ರಿಂದ ರಾಜ್ಯಾಧ್ಯಂತ್ಯ ಸರ್ಕಾರದ Another ಜನಾಂದೋಲನ: ರಾಮಣ್ಣ ಬಲ್ಲಹುಣ್ಸಿ*

ವಿಜಯಪುರ: ಇದೇ ಫೆಬ್ರವರಿ ೨೭ ರಿಂದ ಮಾರ್ಚ ೦೧ ವರೆಗೆ ದಲಿತ ದ್ರೋಹಿ ಸರ್ಕಾರದ ವಿರುದ್ದ ಜನಾಂದೋಲ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನದ ಸಂಯೋಜರಾದ ರಾಮಣ್ಣ ಬಲ್ಲಹುಣ್ಸಿ ಹೇಳಿದರು.
ಅವರು ನವನಗರದಲ್ಲರಿವು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಛೇರಿಯಲ್ಲಿ ಮಂಗಳವಾರ ಜರುಗಿದ
ಎಸ್.ಸಿ.ಎಸ್.ಪಿ/ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲನ ಹೋರಾಟದ ಪೂರ್ವ ಬಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು

ರಾಜ್ಯದ್ಯಾಂತ ೧೪ ತಂಡಗಳಲ್ಲಿ ಇದೇ ದಿನಾಂಕ ೨೭ರಿಂದ ಮಾರ್ಚ ದಿನಾಂಕ ೦೧ ವರೆಗೆ ಎಸ್.ಸಿ.ಎಸ್.ಪಿ/ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲನ ಹಮ್ಮಿಕೊಳ್ಳಲಾಗಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್.ಆಶೋಕ, ಮಾಜಿ ಸಂಸದ ಡಾ. ಉಮೇಶ ಜಾಧವ್, ಅಮರೇಶ್ವರ ನಾಯಕ್, ಬಳ್ಳಾರಿ ಹನುಮಂತಪ್ಪ, ಗುರುರಾಜ ಗಂಟಹೊಳೆ, ರಾಜು ನಾಯ್ಕರ, ಪ್ರತಾಪ್‌ಗೌಡ ಪಾಟೀಲ, ಅರುಣ ಶಹಾಪುರ, ಇವರುಗಳ ನೇತೃತ್ವ ೧೪ ತಂಡಗಳನ್ನು ರಚಿಸಲಾಗಿದೆ, ರಾಮಣ್ಣ ಬಲ್ಲಾಹುಣ್ಸಿ ಹಾಗೂ ಪಿ.ಓಂಕಾರ ತುಮಕುರ ಇವರು ಸಂಯೋಕರಾಗಿ ಕಾರ್ಯ ನಿರ್ವಹಿಸುವರು, ರಾಜ್ಯಾದ್ಯಂತ ಈ ತಂಡಗಳು ಫೆಬ್ರವರಿ ೨೭ರಿಂದ ಮಾರ್ಚ ೦೧ ವರೆಗೆ ಪ್ರವಾಸ ಮಾಡಲಿದ್ದು ಸರ್ಕಾರದ ವಿರುದ್ಧ ಬೃಹತ್ ಆಂಧೋಲನ ನಡಯಲಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಕೂಡಾ ಆಂದಲೋನದ ರೂಪರೇಶಗಳ ಬಗ್ಗೆ ತಿಳಿಸುತ್ತಾ ಅಂದು ಬೃಹತ್ತ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಢಳಿತ ಭವನಕ್ಕೆ ಮುತ್ತಿಗೆ ಹಾಕಿ ಜನಾಂದೋಲನವನ್ನು ವ್ಯಕ್ತಪಡಿಸುವದಾಗಿ ತಿಳಸಿದರು.
ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯಧರ್ಶಿ ರಾಜು ನಾಯಕ ಮಾತನಾಡಿ ಅವರು ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಸರಕಾರ ವಿರೂದ್ಧ ಈ ಜನಾಂದೋಲನದ ಹೋರಾಟ ವಿಬಿನ್ನವಾಗಿರಲಿದೆ. ಕಾರಣ ಎಲ್ಲ ಕಾರ್ಯಕ್ರರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಂಧೋಲವನ್ನು ಯಶಸ್ವಿಗೊಳಿಸ ಎಂದರು.  ಮುಖಂಡರಾದ ಚಿದಾನಂದ ಚಲವಾದಿ ಅವರು ಮಾತನಾಡಿದರು
ಸಭೆಯಲ್ಲಿ ಕಾರ್ಯಕ್ರಮದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುಳುಗೋಡ ಪಾಟಿಲ್ ಸಂಜೆ ಐಹೊಳೆ ಮಹೇಂದ್ರ ನಾಯಕ್ ರವಿ ವಗ್ಗೆ ಶ್ರೀನಿವಾಸ್ ಕಂದಗಲ್ ಗುರು ತಳವಾರ್ ಭರತ್ ಕೋಳಿ ಭಿಮಾಶಂಕರ್ ಹದನೂರು ಮಲ್ಲಿಕಾರ್ಜುನ ಕಿವುಡಿ ವಿಜಯ್ ಜೋಶಿ ಶಿಲ್ಪ ಕುದುರೆಗೊಂಡ ಪ್ರವೀಣ್ ನಾಟೇಕರ್ ಸೇರಿದಂತೆ ಅನೇಕರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";