ವಿಜಯಪುರ: ಅರೆ ಬೆತ್ತಲೆ ಕಳ್ಳನೋರ್ವ ಮನೆ ಕಳ್ಳತನಕ್ಕೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ನಡೆದಿದೆ.
ಇನ್ನು ಅರೆ ಬೆತ್ತಲೆ ಕಳ್ಳ ಮನೆಯ ಒಳಗೆ ನುಗ್ಗಿ ಬರಿ ಕೈಯಲ್ಲಿ ಹೊರಗಡೆಗೆ ಬಂದಿದ್ದಾನೆ. ಕಳ್ಳತನಕ್ಕೆ ಹೊಂಚು ಹಾಕಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಲ್ಲದೇ, ಅರೆ ಬೆತ್ತಲೆ ಕಳ್ಳ ಮುಖಕ್ಕೆ ಅರ್ಧ ಮಾಸ್ಕ್ ಹಾಕಿಕೊಂಡಿದ್ದಾನೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.