ಕೇರಳ: ಮುತ್ತು(Kiss)ಗಾಗಿ ಪತ್ನಿಯನ್ನು ಪತಿಯೇ ಕುಡಿದು ನಶೆಯಲ್ಲಿ ಕೊಲೆ ಮಾಡಿರುವ ಘಟನೆ ಕೇರಳದ ಮನ್ನಾರ್ ಕಾಡ್ ಸಮೀಪದ ಕಾರಕುರ್ಶಿ ಎಂಬಲ್ಲಿ ನಡೆದಿದೆ.
ಹಲ್ಲುಜ್ಜದೆ ಮಗುವಿಗೆ ಮುತ್ತು ಕೊಡಬೇಡಿ ಎಂದು ಎಂದು ಹೇಳಿದ್ದಕ್ಕೆ ಹೆಂಡತಿಯೊಂದಿಗೆ ಜಗಳವಾಡಿದ ಗಂಡ, ಆಕೆಯನ್ನು ಕೊಂದು ಹಾಕಿದ್ದಾನೆ. ವೀಟ್ಟಿಕ್ಕಾಡ್ನ ಅವಿನಾಶ್ ಎಂಬಾತ ತನ್ನ ಪತ್ನಿ ದೀಪಿಕಾ (28) ಅನ್ನು ಕೊಲೆ ಮಾಡಿದ್ದಾನೆ. ಒಂದೂವರೆ ವರ್ಷದ ಮಗ ಐವಿನ್ ಎದುರಿಗೆ ಈ ಕೊಲೆ ನಡೆದಿದೆ. ಆರೋಪಿ ಅವಿನಾಶ್ ಅನ್ನು ಮನ್ನಾರ್ ಕಾಡ್ ಪೊಲೀಸರು ಬಂಧಿಸಿದ್ದಾರೆ.