ವಿಜಯಪುರ: ವರದಕ್ಷಿಣೆಗಾಗಿ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಮಾಯಮ್ಮ ಶಿವಾನಂದ ಜೊತಗೊಂಡ ಹತ್ಯೆಯಾಗಿರುವ ದುರ್ದೈವಿ. ಇನ್ನು ಗಂಡ ಶಿವಾನಂದ ಜೊತಗೊಂಡ ಸೇರಿದಂತೆ ಕುಟುಂಬಸ್ಥರು ಹತ್ಯೆಗೈದಿದ್ದಾರೆ ಎಂದು ಮೃತಪಟ್ಟಿರುವ ಕುಟುಂಬಸ್ಥರ ಆರೋಪ ಆಗಿದೆ. ವರದಕ್ಷಿಣೆಗಾಗಿ ಮಾಯಮ್ಮನ್ನು ಕೊಲೆಗೈದು ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.