ರಾಜಸ್ಥಾನ: ಕೋಟಿ ವಿಮಾ ಹಣದ ಆಸೆಗಾಗಿ ಪತಿ ಮಹಾಶಯ ತನ್ನ ಪತ್ನಿಯನ್ನು ಅಪಘಾತದ ಹೆಸರಿನಲ್ಲಿ ಕೊಲೆಗೈದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಮಹೇಶಚಂದ್ ತನ್ನ ಪತ್ನಿಯ ಹೆಸರಿನಲ್ಲಿ 40 ವರ್ಷಗಳ ಅವಧಿಗೆ ವಿಮೆಯನ್ನು ಮಾಡಿಸಿದ್ದರು, ಆದರೆ ಸಹಜ ಮರಣವಾದರೆ 1ಕೋಟಿ. ಆದರೆ ಅಪಘಾತದಲ್ಲಿ ಮೃತಪಟ್ಟರೆ 1.9 ಕೋಟಿ ವಿಮೆಹಣ ದೊರೆಯುತ್ತಿತ್ತು, ಹೀಗಾಗಿ ಆತನ ಪತ್ನಿ ಶಾಲು ತನ್ನ ಸೋದರ ಸಂಬಂಧಿ ರಾಜು ಜೊತೆಗೆ ಬೈಕಿನಲ್ಲಿ ದೇವಸ್ಥಾನಕ್ಕೆ ಕಳುಹಿಸಿದ್ದಾನೆ. ಈ ವೇಳೆ ರೌಡಿ ಶೀಟರ್ ಮಹೇಶ ಸಿಂಗ್ ರಾಠೋಡ್ ಮತ್ತು ಇತರರು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದ್ದು. ತೀವ್ರವಾಗಿ ಗಾಯಗೊಂಡಿದ್ದ ಶಾಲು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ. ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಅದೊಂದು ರಸ್ತೆ ಅಪಘಾತದಂತೆ ಕಂಡುಬರುವಂತೆ ಮಾಡಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.