ವಿಜಯಪುರ: ಮಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಅಳಿಯ ಹತ್ಯೆಗೈದಿರುವ ಆರೋಪಿಯ ವಿರುದ್ಧ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಸೇನ್ ಬಾಷಾ ಶೇಖ್ ವಿರುದ್ಧ ದೂರು ದಾಖಲಾಗಿದೆ. ಇನ್ನು ಕೊಲೆಯಾದ ದಿಲಶಾದ್ ಹವಾಲ್ದಾರ್ ಹಾಗೂ ಪಕ್ಕದ ಮನೆಯಲ್ಲಿ ವಾಸವಿದ್ದ ರಫೀಕ್ ಸಾಲೋಟಗಿ ನಡುವೆ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದೇ ವಿಚಾರವಾಗಿ ಹುಸೇನ್ ಬಾಷಾ, ದಿಲಶಾದ್ ಜತೆ ಜಗಳ ತೆಗೆದು ಚಾಕುವಿಂದ ಇರಿದಿದ್ದಾನೆ. ತದನಂತರ ಗ್ಯಾರೇಜ್ಗೆ ಓಡಿ ಹೋಗಿ ಮುಜಮಿಲ್ನ್ನು ಚಾಕುವಿನಿಂದ ಇರಿದ್ದಿದ್ದಾನೆ. ಅದೃಷ್ಟವಶಾತ್ ಆತ ಬದುಕಿದ್ದಾನೆ. ಈ ಕುರಿತು
ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.