ವಿಜಯಪುರ: ಆರ್ಎಸ್ಎಸ್ ಮುಂಚೆ ದೇಶದಲ್ಲಿ ಸಂಸ್ಕೃತಿ ಇರಲಿಲ್ವಾ. ಸಂಸ್ಕೃತಿಯನ್ನು ಜನತೆ ಉಳಿಸಿರಲಿಲ್ವಾ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆರ್ಎಸ್ಎಸ್ ವಿರುದ್ಧ ಕಿಡಿಕಾರಿದರು.
ಆರ್ಎಸ್ಎಸ್ ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ. ಧರ್ಮದಲ್ಲಿ ಹೆಸರಿನಲ್ಲಿ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ ಎಂದರು. ಇನ್ನು ಸರ್ಕಾರ ನಡೆಸುವವರು ಕೈಯಿಂದ ಬಾಚುತ್ತಿಲ್ಲ. ಸರ್ಕಾರದ ಸಂಪತ್ತು ಲೋಟಿ ಮಾಡುತ್ತಿದ್ದಾರೆ. ಹಿಟಾಚಿಯಿಂದು ಸರ್ಕಾರದ ಸಂಪತ್ತನ್ನು ಬಗೆಯುತ್ತಿದ್ದಾರೆ. ಇದು ಆರ್ಎಸ್ಎಸ್ ಸಂಸ್ಕೃತಿ ನಾ ಎಂದು ಕಿಡಿಕಾರಿದರು.