![](https://karnataka1news.com/wp-content/uploads/2023/11/IMG_20231122_155617-1.jpg)
ವಿಜಯಪುರ: ಶಾಲೆ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆರ್ ಎಂ ಶಹಾ ಶಾಲೆ ಆವರಣದಲ್ಲಿ ನಡೆದಿದೆ. ಶಾಲೆಯ ಮೊದಲ ಮಹಡಿಯಿಂದ ಯುಕೆಜಿ ತರಗತಿಯ ವಿದ್ಯಾರ್ಥಿ ಶಿವರಾಜ್ ರೋಡಗಿ (5) ಬಿದ್ದು ಮೃತಪಟ್ಟಿದ್ದಾನೆ. ಶಾಲೆಗೆ ಬಂದಿದ್ದ ವಿದ್ಯಾರ್ಥಿ ಶಿವರಾಜ್ ಮೊದಲನೇ ಮಹಡಿಗೆ ಹೋಗಿದ್ದಾನೆ. ಈ ವೇಳೆ ಮಹಡಿಯಿಂದ ಬಿದ್ದಿದ್ದಾನೆ. ಮೃತ ವಿದ್ಯಾರ್ಥಿ ಇಂಡಿ ತಾಲೂಕಿನ ಮಾವಿನಳ್ಳಿ ಗ್ರಾಮದವನು. ಅಲ್ಲದೇ, ಆಡಳಿತ ಮಂಡಳಿಯವರು ಶಿವರಾಜ್ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತದನಂತರ ಆಸ್ಪತ್ರೆಗೆ ತಂದು ಶಾಲೆಯವರು ಹೋಗಿದ್ದಾರೆ. ಆದ್ರೇ, ಆಸ್ಪತ್ರೆಗೆ ತರುವ ಮೊದಲೇ ಶಿವರಾಜ್ ಸಾವನಪ್ಪಿದ್ದಾನೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/11/IMG_20231122_155635-1024x570.jpg)