ಬಾಗಲಕೋಟೆ: ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಹತ್ತಿರ ಸಂಭವಿಸಿದೆ.
ಬೀಳಗಿ ತಾಲೂಕಿನ ಗೋವಿನದಿನ್ನಿ ಮೂಲದ ರಾಮಸ್ವಾಮಿ ಮಹಾದೇವ ಕರಿಗಾರ್.ಹಾಗೂ ರಜಾಕಸಬ್ ಜಂಬಗಿ ಮತ್ತು ಬೀಳಗಿ ಮೂಲದ ಮಲ್ಲಪ್ಪ ಮಳಲಿ,ನಾಸಿರ್ ಅಹಮದ್ ಮುಲ್ಲಾ ಮೃತ ದುರ್ದೈವಿಗಳು. ಐಸರ್ ಮಿನಿಲಾರಿ ಪಂಚರ್ ಆದ ಹಿನ್ನಲೆ ಸ್ಟೆಪ್ನಿ ಜೋಡಣೆ ಮಾಡುತ್ತಿರುವವಾಗ ಈ ನಾಲ್ವರು ನೋಡುತ್ತ ನಿಂತಾಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಈ ನಾಲ್ವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.