ವಿಜಯಪುರ: ಚಲಿಸುತ್ತಿದ ಕಂಟೇನರ್ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಸಂದೀಪ ಎಂಬುವರಿಗೆ ಸೇರಿದ ಲಾರಿ ಅರ್ಧ ಭಸ್ಮವಾಗಿದೆ. ಸಿಂದಗಿ ಮಾರ್ಗವಾಗಿ ಕಲಬುರಗಿಗೆ ಹೋಗುತ್ತಿದ ಕಂಟೇನರ್ನಲ್ಲಿ ಅವಘಡ ಆಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.