ಅಫ್ಘಾನಿಸ್ತಾನ: ಟಿವಿ ನಿರೂಪಕ ಇದೀಗ್ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾನೆ. ಹೌದು..! ಅಫ್ಘಾನಿಸ್ತಾನದ ಮಾಜಿ ಟಿವಿ ಆ್ಯಂಕರ್ ಮೂಸಾ ಮೊಹಮ್ಮದಿ ಎಂಬಾಥು ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟಕ್ಕೆ ಕೇಳುತ್ತಿರುವ ಚಿತ್ರಗಳನ್ನು ಲಭ್ಯವಾಗಿದೆ. ಅಲ್ಲದೇ, ಹಮೀದ್ ಕರ್ಜೈ ನೇತೃತ್ವದ ಸರ್ಕಾರದಲ್ಲಿ ಕೆಲಸ ಮಾಡಿದ್ದ ಮಾಜಿ ಅಧಿಕಾರಿ, ಪತ್ರಕರ್ತ ಕಬೀರ್ ಹಕ್ಮಲ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪತ್ರಕರ್ತರ ಬದುಕು ಇದಾಗಿದೆ. ಮೂಸಾ ಮೊಹಮ್ಮದಿ ಅವರು ಸುದ್ದಿ ನಿರೂಪಕರಾಗಿ, ಪತ್ರಕರ್ತರಾಗಿ ವಿವಿಧ ವಾಹಿನಿಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ಈಗ ಅವರಿಗೆ ಅದಾಯವಿಲ್ಲ. ಹೀಗಾಗಿ ಬೀದಿಯಲ್ಲಿ ಆಹಾರ ಪದಾರ್ಥ ಮಾರಿ ಹಣ ಸಂಪಾದಿಸಬೇಕಾದ ಪರಿಸ್ಥಿತಿ ಎದುರಾಗಿದೆ.