ವಿಜಯಪುರ: ಸಾಲಬಾಧೆ ತಾಳಲಾರದೆ ಮನನೊಂದು ಜಮೀನಿನಲ್ಲಿ ನೇಣು ಬಿಗಿದುಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಶಿರೋಳ ಗ್ರಾಮದ ದಾನಪ್ಪ ಮಲಕಾಜಪ್ಪ ಹೆಬ್ಬಾಳ(45) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಜಮೀನಿನಲ್ಲಿ ಹಾಕಿದ್ದ ಸಜ್ಜೆ ಬೆಳೆ ರಾಶಿ ಮಾಡುವ ಮುಂಚೆ ಮಳೆ ಬಂದು ಹಾನಿಯಾಗಿತ್ತು.ಅಲ್ಲದೇ ನೇಕಾರಿಕೆಯಲ್ಲೂ ಅಷ್ಟೊಂದು ಆದಾಯ ಇಲ್ಲದ್ದರಿಂದ ಅವರಿವರ ಬಳಿ ಮಾಡಿಕೊಂಡಿದ್ದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.