ವಿಜಯಪುರ: ಪರೀಕ್ಷೆ ಬರೆಯಲು ಹೋಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಜುಲೈ ಗಲ್ಲಿಯಲ್ಲಿ ನಡೆದಿದೆ.
36 ವರ್ಷದ ಯುವಕ ಶ್ರೀಧರ ಶಾಂತಾರಾಮ್ ಮಸೂತಿ ನಾಪತ್ತೆಯಾಗಿರುವ ಯುವಕ. ಇನ್ನು ಮನೆಯಲ್ಲಿ ಪರೀಕ್ಷೆ ಬರೆಯಲು ಹೋಗುತ್ತೇನೆ ಎಂದು ಬ್ಯಾಗ್ನಲ್ಲಿ ಬಟ್ಟೆ ತೆಗೆದುಕೊಂಡು ಹೋಗಿದ್ದಾನೆ. ಆದ್ರೇ, ಮರಳಿ ಮನೆಗೆ ಬಂದಿಲ್ಲ. ಸುತ್ತಮುತ್ತಲಿನ ಕಡೆಗೂ ವಿಚಾರಿಸಿದ್ರೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ವಿಜಯಪುರ ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.