ವಿಜಯಪುರ: ಶಿಕ್ಷಣದಲ್ಲಿ ವ್ಯಾಪಾರಿಕರಣ ನಿಲ್ಲಿಸಿ ಎಂದು ಎಬಿವಿಪಿ ನವರು ವಿಜಯಪುರದ ಗಾಂಧಿಚೌಕ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದರು. ಅಲ್ಲದೇ, ಡೊನೇಶನ್ ಹಾವಳಿ ನಿಲ್ಲಿಸಬೇಕು. ಭ್ರಷ್ಟಮುಕ್ತ ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.