ವಿಜಯಪುರ: ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯಲ್ಲಿನ ವಸ್ತುಗಳು ಭಸ್ಮವಾಗಿರುವ ಘಟನೆ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ನಡೆದಿದೆ.
ನಬಿಸಾಬ್ ಕೊಡಗಾನೂರ ಎಂಬುವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿರುವ ಟಿವಿ, ಪ್ರಿಡ್ಜ್, ಎಸಿ, ಕಂಪ್ಯೂಟರ ಹಾಗು ಮನೆ ಬಳಕೆಯ ಎಲ್ಲ ವಸ್ತುಗಳು ಭಸ್ಮವಾಗಿದೆ. ಅಲ್ಲದೇ, ಸುಮಾರು 4 ಲಕ್ಷದಷ್ಟು ಹಾನಿಯಾಗಿದೆ. ಈ ಘಟನೆ ಜಾಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.