![](https://karnataka1news.com/wp-content/uploads/2023/07/IMG_20230719_221620.jpg)
ಬೆಂಗಳೂರು: ವಿಧಾನಸಭಾ ಸದನದಲ್ಲಿ ಮಾರ್ಷಲ್ಗಳು ಹೊರಗೆ ಹಾಕುವ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಸಿಎಂ ಸಿದ್ಧರಾಮಯ್ಯ, ಸ್ಪೀಕರ್ ಯು.ಟಿ.ಖಾದರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕವಾಗಿ ಭೇಟಿ ನೀಡಿ ಯತ್ನಾಳವರ ಆರೋಗ್ಯ ವಿಚಾರಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಸದನದ ಬಾವಿಗಿಳಿದು ಹೋರಾಟ ನಡೆಸಿದ್ದರು. ಈ ಸಮಯದಲ್ಲಿ ಯತ್ನಾಳ ಸೇರಿ ಹತ್ತು ಶಾಸಕರನ್ನ ಈ ಅಧಿವೇಶನ ಮುಗಿಯುವವರೆಗೂ ಅಮಾನತ್ತು ಮಾಡಲಾಗಿತ್ತು.
![](https://karnataka1news.com/wp-content/uploads/2023/07/IMG_20230719_221605.jpg)