ವಿಜಯಪುರ: ವಿಜಯಪುರ ಪಾಲಿಕೆಯಲ್ಲಿ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಸೋಲು ಹಿನ್ನಲೆ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಅಸಮಾಧಾನ ಪೋಸ್ಟ್ ಸಕತ್ ವೈರಲ್ ಆಗುತ್ತಿದೆ. ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಕ್ಷದ ನಾಯಕ, ಇನ್ನೋರ್ವ ನಾಯಕ ವಿರುದ್ಧ ಅಸಮಾಧಾನ ಪೋಸ್ಟ್ ಹಾಕಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೋಲಿನ ನೋವು ವಿದ್ಯಾರಾಣಿ ಹೊರ ಹಾಕಿದ್ದಾರೆ.
ಪೋಸ್ಟ್ನಲ್ಲಿ ಏನು ಇದೆ..
ಇಬ್ಬರು ಜಾತಿ ನಿಷ್ಠೆ ಇಲ್ಲ,ಪಕ್ಷ ನಿಷ್ಠೆ ಇಲ್ಲ, ಮಗಳು ಭಾಷಣ ಮಾಡ್ತಾಳೆ ಜಾತಿ ಬಗ್ಗೆ ನಾಚಿಕೆ ಬರ್ಬೇಕು. ಇನ್ನು ನನಗೆ ಮುಸ್ಲಿಂ ಜನ ಮೋಸ ಮಾಡಿಲ್ಲ. ನಮ್ಮ ಜಾತಿ ಅಂತ ಸುಳ್ಳು ಹೇಳುವ 2 ಅದಾವ್ ನಮ್ಮ ಜಿಲ್ಲಾದಲ್ಲಿ.. ಇನ್ನೂ ಪಿಚ್ಚರ್ ಬಾಕಿ ಇದೆ ಎಂದು ಇಬ್ಬರೂ ನಾಯಕರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ತುಂಗಳ ಎಚ್ಚರಿಕೆ ನೀಡಿದ್ರಾ..?
ವಿಜಯಪುರ ನಗರ ವಾರ್ಡ್ ನಂಬರ್ 24ರಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಹೀನಾಯವಾಗಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ವಿಮಲಾ ಕಾಣೆ ಗೆಲುವು ಸಾಧಿಸಿದ್ದಾರೆ.