ವಿಜಯಪುರ: ಭಾರತೀಯ ವಾಯುಸೇನೆಯಲ್ಲಿ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನೀವೀರ ವಾಯು ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಕ್ಯೂ ಆರ್ ಕೋಡ್ ಅಥವಾ http://agnipathvayu.cdac.in ಮೂಲಕ ನೋಂದಾಯಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮಾರ್ಚ್-31 ಕೊನೆಯ ದಿನವಾಗಿದೆ. 26 ಡಿಸೆಂಬರ್,2002 ರಿಂದ 26 ಜೂನ್,2006ರ ನಡುವೆ ಜನಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ https:// careerindianairforce.cdac.in, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆ 08352250383 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.