ವಿಜಯಪುರ: ಮನೆಗಳ್ಳತನ ಹಾಗುಜ ಬೈಕ್ಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಮುತ್ತಪ್ಪ ಹಣಮಂತ ಮೂಲಿಮನಿ ಹಾಗೂ ಮಹಾವೀರ ರಾಮಜಿ ಚವ್ಹಾಣ ಬಂಧಿತ ಆರೋಪಿಗಳು. ಇನ್ನು ಬಂಧಿತರಿಂದ 8.16 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ಮೌಲ್ಯದ ಮೂರು ಬೈಕ್ಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಆರೋಪಿಗಳು ನಗರಾದ್ಯಂತ ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.