ವಿಜಯಪುರ: ವೃದ್ಧ ವ್ಯಾಪಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಸೃಷ್ಟಿ ಕಾಲೋನಿಯಲ್ಲಿ ನಡೆದಿದೆ. 75 ವರ್ಷ ಮಹಮ್ಮದ್ ಯೂಸುಫ್ ಸೈಯದಸಾಬ್ ಸಾಂಗಲಿಕರ್ ನಾಪತ್ತೆಯಾಗಿದ್ದಾರೆ.
ಇನ್ನು ಮನೆಯಿಂದ ಹೊರಗಡೆಗೆ ಹೋದಾಗ ಮರಳಿ ಮನೆಗೆ ಬಂದಿಲ್ಲ. ಅಲ್ಲದೇ, ಮನೆಯಿಂದ ಹೋಗುವಾಗ ಮಹಮ್ಮದ್ ಯೂಸುಫ್ ನಾಪತ್ತೆಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದಕ್ಕಾಗಿ ಇವರ ಗುರುತು ಸಿಕ್ಕರೇ 9448185654 ಅಥವಾ 6363061407ಗೆ ಮಾಹಿತಿ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.