ವಿಜಯಪುರ: ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಕಳ್ಳತನ ಮಾಡುವ ವೇಳೆ ಅಪರಿಚಿತ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರ ನಗರದ ಶಾಸ್ತ್ರೀ ಮಾರ್ಕೆಟ್ನಲ್ಲಿ ನಡೆದಿದೆ. ಶಾಂತವೀರ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಇದನ್ನು ಕಂಡ ಅಂಗಡಿ ಮಾಲೀಕ ಹಾಗೂ ಸ್ಥಳೀಯರು ಹಿಡಿದುಕೊಂಡು ಧರ್ಮಧೇಟು ನೀಡಿದ್ದಾರೆ. ಅಪರಿಚಿತ ಕಳ್ಳನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.