ವಿಜಯಪುರ: ಪ್ರಧಾನಿ ಮೋದಿ ಟೀಕಿಸಿದ್ದ ಪಾಕಿಸ್ತಾನ ಸಚಿವ ಬಿಲ್ವಾಲ್ ಭುಟ್ಟೋ ವಿರುದ್ಧ ವಿಜಯಪುರ ನಗರದ ಗಾಂಧಿಚೌಕ್ ನಲ್ಲಿ ಬಿಜೆಪಿ ಯುವಮೋರ್ಚದಿಂದ ಶನಿವಾರ ಪ್ರತಿಭಟನೆ ನಡೆಸಿದರು. ಉಗ್ರರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕರಿಗೆ ದೇಶದ ಬಗ್ಗೆ ಗೌರವ ಇಲ್ಲೆಂದು ಪ್ರತಿಭಟನಾಕಾರರು ಕಿಡಿಕಾರಿದರು. ಅಲ್ಲದೇ, ಪಾಕಿಸ್ತಾನ ಸಚಿವ ಭುಟ್ಟೋ ಫೋಟೊಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ತಕ್ಷಣವೇ ಕ್ಷಮೆಯಾಚಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.