ಬೆಂಗಳೂರು: ಚೀನಾದಲ್ಲಿ ಮತ್ತೇ ಕೋವಿಡ್ ಉಲ್ಬಣ ಹಿನ್ನಲೆ ಭಾರತದಲ್ಲಿ ಟೈಟ್ ರೂಲ್ಸ್ ಜಾರಿ ಆಗಬಹುದು. ಈಗಾಗಲೆ ಕೇಂದ್ರ ಸರ್ಕಾರದಿಂದ ರೂಲ್ಸ್ಗೆ ಅನುಮತಿ ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ರಾಜ್ಯಾದ್ಯಂತ ಮಾಸ್ಕ್ ರೂಲ್ಸ್ ಬರಬಹುದು.
ಆರೋಗ್ಯ ಇಲಾಖೆ ಕಾರ್ಯದರ್ಶಿಯಿಂದ ಲೆಟರ್ ಬಂದಿದ್ದು, ಬೆಂಗಳೂರಿಗೂ ಕೇಂದ್ರದಿಂದ ಅಲರ್ಟ್ ಆಗುವಂತೆ ಮಾಹಿತಿ ನೀಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಮಿಸ್ ಮಾಡದೇ ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಗುಂಪಿನಲ್ಲಿರುವಾಗ ಮಾಸ್ಕ್ ಧರಿಸುವುದು ಮರೆಯಬೇಡಿ ಎಂದು ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ.