ವಿಜಯಪುರ: ವಿಜಯಪುರ ನಗರದ ಆಲಕುಂಟೆ ನಗರದ ನಿವಾಸಿಯಾದ 14 ವರ್ಷ ವಯಸ್ಸಿನ ಮೋಹನ ಭರತ್ ಜಾಧವ ಎಂಬ ಬಾಲಕ ಕಾಣೆಯಾಗಿರುವ ಕುರಿತು ಆದರ್ಶನ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಪತ್ತೆಗಾಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾಣೆಯಾದ ಬಾಲಕ 5 ಫೂಟ್ ಎತ್ತರ, ಕನ್ನಡ, ಲಂಬಾಣಿ, ಹಿಂದಿ ಭಾಷೆ ಬಲ್ಲವನ್ನಾಗಿದ್ದು, ಮೈಯಿಂದ ಸಾಧಾರಣ, ಸೀದಾ ಮೂಗು, ದುಂಡು ಮುಖ, ಗೋದಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ಈ ಚಹರೆಪಟ್ಟಿಯುಳ್ಳ ಬಾಲಕನ ಕುರಿತು ಮಾಹಿತಿ ದೊರೆತಲ್ಲಿ ಸಾರ್ವಜನಿಕರು, ಜಿಲ್ಲಾ ಪೊಲೀಸ್ ಕಚೇರಿ 08352-250152, ಗೋಲಗುಮ್ಮಜ ವೃತ್ತ ದೂರವಾಣಿ ಸಂಖ್ಯೆ 08352-250252 ಅಥವಾ ಆದರ್ಶ ನಗರ ಪೊಲೀಸ್ ಠಾಣೆ ದೂರವಾಣಿ: 08352-263333, 9480804250 ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.