ಜೈ ಜವಾನ ಜೈ ಕಿಸಾನ ಸಂಘಟನೆ ವತಿಯಿಂದ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಅಧಿಕಾರಿಯಿಂದ ಮಹಿಳೆಗೆ ಕಿರುಕುಳ ನೀಡುತ್ತಿರುವ ಕುರಿತಾಗಿ ಇಂದು ವಿಜಯಪುರ ನಗರದಲ್ಲಿ ಉಪ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು..ಈ ಸಂದರ್ಬದಲ್ಲಿ ಮಾತನಾಡಿದ ಅಧ್ಯಕ್ಷರಾದ ಮೋತಿರಾಮ ಚವ್ಹಾನ ಮಾತನಾಡಿ..
ವಿಜಯಪುರ ನಗರದ ಟಕ್ಕೆಯಲ್ಲಿರುವ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಯಿಸ್ತಾ ನದಾಪ ಎಂಬ ಅಡಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದು,ಇವರಿಗೆ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಅಧಿಕಾರಿಯಾದ ಪ್ರಶಾಂತ ಪೂಜಾರಿ ಎಂಬಾತ ವೇತನ ಕಡಿತಗೊಳಿಸಿ ತಮ್ಮ ಮನೆಯ ಕೆಲಸ ಮಾಡಲು ಪ್ರೇರಿಸಿದ್ದು ತಪ್ಪು ಎಂದರು ಅದಲ್ಲದೆ ಜಿಲ್ಲಾಧಿಕಾರಿಗಳು ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಆಗ್ರಹ ಪಡಿಸಿದರು..ಇನ್ನು ತೊಂದರೆಗೆ ಒಳಗಾದ ಮಹಿಳೆ ಶಯಿಸ್ತಾ ನದಾಥ ಮಾತನಾಡಿ ನಾನು ಸುಮಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು ನನಗೆ ಯಾವುದೇ ತೊಂದರೆ ಆಗಿದಿಲ್ಲ ಆದರೆ ಈ ಅಧಿಕಾರಿ ಶಾಲೆಯ ಕೆಲಸದ ಜೊತೆ ಅವರ ಮನೆ ಕೆಲಸ ಮಾಡುವವರ ಆದಾಯ ಹೆಚ್ಚಿಗೆ ಮಾಡಿ ನನಗೆ ಕಡಿಮೆ ಆದಾಯ ಕೊಡುತ್ತಿರುವದು ತಪ್ಪು ಎಂದು ದೂರಿದರು..