ವಿಜಯಪುರ: ಪ್ರಸಕ್ತ 2023-24ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರೊಳಗಾಗಿ ಪಾವತಿಸಿ ಆಸ್ತಿ ಮಾಲೀಕರು ಶೇ.5 ರಷ್ಟು ರಿಯಾಯಿತಿ ಸದುಪಯೋಗ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಈಗಾಗಲೇ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ 3 ವಲಯಗಳನ್ನು ಸ್ಥಾಪಿಸಲಾಗಿದ್ದು, ಆಯಾ ಸಂಬಂಧಪಟ್ಟ ವಾರ್ಡಗಳಲ್ಲಿಯ ಕರದಾತರು ತಮ್ಮ ಆಸ್ತಿಕರ ಪಾವತಿಗೆ ಬೇಕಾಗುವ ಫಾರ್ಮ-1ಗಳನ್ನು ಆಯಾ ವಲಯಗಳಲ್ಲಿ ವಾರ್ಡವಾರು ಪಡೆದುಕೊಳ್ಳಬಹುದಾಗಿದೆ. ಫಾರ್ಮ-1ರಲ್ಲಿ ನಮೂದಾದ ಆಸ್ತಿಕರದ ಮೊತ್ತವನ್ನು ಕರ್ನಾಟಕ ಒನ್ ಕ್ಯಾಶ್ ಕೌಂಟರ್ ವಲಯ1 ಹಾಗೂ ವಲಯ 3 ರಲ್ಲಿನ ಕಚೇರಿಗಳಲಿ ಸಂದಾಯ ಮಾಡಬಹುದಾಗಿದೆ.
ಆಯಾ ವಲಯಗಳು ವಾರ್ಡವಾರು ವಲಯ-1 ಗಾಂಧಿ ಚೌಕ ಹತ್ತಿರವಿರುವ ಮಹಾನಗರ ಪಾಲಿಕೆ ಕಚೇರಿ ವಾರ್ಡ ಸಂಖ್ಯೆ : 1,2,3,45,6,7,8,9,10,11, 27,31, 32 ವಲಯ-2 ವಾಟರ್ ಬೋರ್ಡ ಕಾರ್ಯಾಲಯ ಪಕ್ಕದಲ್ಲಿರುವ ಕಚೇರಿ, ಬಡಿಕಮಾನ ರಸ್ತೆ ವಾರ್ಡ ಸಂಖ್ಯೆಗಳು 12, 13, 14, 15, 16, 17, 18, 19, 20, 24, 25, 26, ವಲಯ-3 ಜಲನಗರ ಮಹಾನಗರ ಪಾಲಿಕೆ ಮುಖ್ಯ ಕಚೇರಿ ವಾರ್ಡ ಸಂಖ್ಯೆ : 21, 22, 23, 28, 29, 30, 33, 34, 35 ಹಾಗೂ ಆಸ್ತಿ ತೆರಿಗೆಯನ್ನು ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಪಾವತಿಸಹಬುದಾಗಿದೆ.
ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರೊಳಗಾಗಿ ಪಾವತಿಸಿ ಶೇ.5 ರ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳುವಂತೆ ಪಾಲಿಕೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.