ವಿಜಯಪುರ: ನಗರಾದ್ಯಂತ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಹಾರ ಗ್ರಾಮದ ವೀರಭದ್ರ ಕುಂಬಾರ, ಶ್ರೀಶೈಲ ಬಿರಾದಾರ ಬಂಧಿತ ಆರೋಪಿಗಳು.
ಇನ್ನು ಬಂಧಿತ ಆರೋಪಿಗಳಿಂದ 13 ಹೊಂಡಾ ಸೈನ್ ಬೈಕ್‌ಗಳು, 4 ಹಿರೋ ಕಂಪನಿಯ ಬೈಕ್‌ಗಳು ಹೀಗೆ 11 ಲಕ್ಷ ಮೌಲ್ಯದ 17 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.