K1N ಡೆಸ್ಕ್: ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನವಾಗಿದ್ದು, ಅರ್ಜಿ ಸಲ್ಲಿಸಲು ಹಲವು ಆಕಾಂಕ್ಷಿಗಳು ಲಿಸ್ಟ್ ದೊಡ್ಡದು ಇದೆ. ವಿವಿಧ ಮತಕ್ಷೇತ್ರದ ಹಲವರಿಂದ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಹಾಲಿ, ಮಾಜಿ ಶಾಸಕರ ಜೊತೆ ಹೊಸಮುಖಗಳ ಪೈಪೋಟಿ ನಡೆಯಲಿದೆ. ಕೆಪಿಸಿಸಿ ನಿನ್ನೆ ಸಂಜೆಯವರೆಗೆ ಒಟ್ಟು 1056 ಅರ್ಜಿ ಪಡೆದಿದೆ. ಅರ್ಜಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ 350 ಆಕಾಂಕ್ಷಿಗಳಿದ್ಧಾರೆ. ಸಾಮಾನ್ಯ ವರ್ಗದ 700 ಆಕಾಂಕ್ಷಿಗಳು ಅರ್ಜಿ ಪಡೆದಿದ್ದಾರೆ, 450 ಅರ್ಜಿಗಳುಡಿಡಿಯೊಂದಿಗೆ ಸಲ್ಲಿಕೆಯಾಗಿವೆ. ಅರ್ಜಿ ವಿಚಾರಣೆ ದಿನಾಂಕ ಮತ್ತೆ ಮುಂದೂಡಿಕೆಗೆ ಕೆಪಿಸಿಸಿ ಚಿಂತನೆ ನಡೆಸುತ್ತಿದೆ.
ಸಾಮಾನ್ಯ ವರ್ಗದವರಿಗೆ 2 ಲಕ್ಷ, SC-STಗೆ 1 ಲಕ್ಷ ಅರ್ಜಿ ಶುಲ್ಕ ಪಡೆಯಲಾಗಿದೆ. ಅರ್ಜಿ ಸಲ್ಲಿಸಿದ ನಂತರ ನಾಯಕರ ಭೇಟಿ ಮಾಡಲಿದ್ದಾರೆ.