ವಿಜಯಪುರ: ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ನಗದವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ಹೊರವಲಯದ ಚೆಕ್ ಪೋಸ್ಟ್ನಲ್ಲಿ ಶುಕ್ರವಾರ ನಡೆದಿದೆ. ಗಜೇಂದ್ರಗಡ- ಮುದ್ದೇಬಿಹಾಳ ಬಸ್ನಲ್ಲಿ ಹಣ ಸಾಗಾಟ ಮಾಡುವ ವೇಳೆ ಪೊಲೀಸರು ದಾಳಿಗೈದಿದ್ದಾರೆ. ಸ್ಟಾರ್ ಗುಟ್ಕಾ ಚೀಲದ ಬಟ್ಟೆಯ ಬ್ಯಾಗ್ನಲ್ಲಿ 500, 200 ಮತ್ತು 50 ಮುಖಬೆಲೆಯ 10 ಲಕ್ಷ ನಗದು ಪತ್ತೆ ಆಗಿದೆ. ಈ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದ ಸುಂದರಾ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಬಸಪ್ಪ ನಿಂಗಪ್ಪ ಹಡಗಲಿನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಬ್ಯಾಂಕ್ನಿಂದ ಬ್ಯಾಂಕ್ಗೆ ವರ್ಗಾವಣೆ ಮಾಡಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಆದ್ರೇ, ಹಣದ ಬಗ್ಗೆ ಯಾವುದೇ ದಾಖಲೆ ಇರಲಿಲ್ಲ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.